ಜಿಲ್ಲಾ ಪಂಚಾಯತ್, ಬಳ್ಳಾರಿ

ಕರ್ನಾಟಕ ಸರ್ಕಾರ

ಜಿಲ್ಲಾ ಪಂಚಾಯತ್, ಬಳ್ಳಾರಿ

ಚರಿತ್ರೆ
ಚಾರಿತ್ರಿಕವಾಗಿ, ಬಳ್ಳಾರಿ ಜಿಲ್ಲೆಗೆ ಪ್ರಾಮುಖ್ಯತೆಗೆ ಬಂದದ್ದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ. ಇದಕ್ಕೆ ಮೊದಲು ಈ ಪ್ರದೇಶ ಶಾತವಾಹನ, ಕಲ್ಯಾಣಿ ಚಾಲುಕ್ಯರು, ಕದಂಬರು, ಸೇವುಣರು ಮತ್ತು ಹೊಯ್ಸಳರ ನಿಯಂತ್ರಣದಲ್ಲಿತ್ತು. ವಿಜಯನಗರ ಸಾಮ್ರಾಜ್ಯ ಬಳ್ಳಾರಿ ಜಿಲ್ಲೆಯಲ್ಲೇ ರಾಜಧಾನಿಯನ್ನು ಹೊಂದಿದ್ದರಿಂದ ಆ ಸಮಯದಲ್ಲಿ ಈ ಜಿಲ್ಲೆ ಪ್ರಾಮುಖ್ಯತೆಗೆ ಬಂದಿತು. ಬ್ರಿಟಿಷ್ ಆಡಳಿತದ ಕಾಲದಲ್ಲಿ ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ಬಳ್ಳಾರಿ ಜಿಲ್ಲೆ ೧೯೫೩ ರಲ್ಲಿ ಮೈಸೂರು ರಾಜ್ಯಕ್ಕೆ ವರ್ಗಾಯಿಸಲ್ಪಟ್ಟಿತು.
ಭೌಗೋಳಿಕತೆ
ಕರ್ನಾಟಕದ ಪೂರ್ವದ ಗಡಿಯಲ್ಲಿರುವ ಬಳ್ಳಾರಿ ಜಿಲ್ಲೆಯ ಉತ್ತರಕ್ಕೆ ರಾಯಚೂರು ಮತ್ತು ಕೊಪ್ಪಳ, ಪಶ್ಚಿಮಕ್ಕೆ ಹಾವೇರಿ ಮತ್ತು ಗದಗ್, ದಕ್ಷಿಣಕ್ಕೆ ದಾವಣಗೆರೆ ಮತ್ತು ಚಿತ್ರದುರ್ಗ ಮತ್ತು ಪೂರ್ವಕ್ಕೆ ಆಂಧ್ರ ಪ್ರದೇಶದ ಅನಂತಪುರ ಹಾಗೂ ಕರ್ನೂಲು ಜಿಲ್ಲೆಗಳಿವೆ. ಈ ಜಿಲ್ಲೆಯ ವಿಸ್ತೀರ್ಣ ೮೪೪೭ ಚ.ಕಿಮೀ ಮತ್ತು ವಾರ್ಷಿಕ ಮಳೆ ೬೩.೯ ಸೆಮೀ. ಬಳ್ಳಾರಿ ಜಿಲ್ಲೆಯಲ್ಲಿ ಕಬ್ಬಿಣ, ಮ್ಯಾಂಗನೀಸ್, ತಾಮ್ರ ಮತ್ತು ಸೀಸದ ಗಣಿಗಳು ಸಾಕಷ್ಟಿವೆ.
ಕೃಷಿ
ಕೃಷಿ ಬಳ್ಳಾರಿ ಜಿಲ್ಲೆಯ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು ತುಂಗಭದ್ರಾ ನದಿ ಮತ್ತು ಹೊಸಪೇಟೆಯಲ್ಲಿನ ತುಂಗಭದ್ರಾ ಅಣೆಕಟ್ಟಿನಿಂದ ಆಗುತ್ತದೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಹತ್ತಿ, ಜೋಳ, ನೆಲಗಡಲೆ, ಭತ್ತ, ಸೂರ್ಯಕಾಂತಿ.

 

ಮತ್ತಷ್ಟು ಓದಿ

ಶ್ರೀ ಬಿ ನಾಗೇಂದ್ರ
ಯುವಜನ ಸೇವೆಗಳು, ಕ್ರೀಡೆಗಳು ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ

ಶ್ರೀ ರಾಹುಲ ಶರಣಪ್ಪ ಸಂಕನೂರು
ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು

ಸಹಾಯವಾಣಿ
Back
District Portals
  • ಭೂಮಿ
  • ಕಾಗದ ರಹಿತ ಎಲ್ಲ ತರಹದ ಪ್ರಮಾಣಪತ್ರಗಳು
  • ಆಧಾರ ಆನ್ ಲೈನ್ ಪರಿಶೀಲನೆ
  • ಸಕಾಲ ಸೇವೆಗಳು
  • ಜಿಲ್ಲಾ ಪಂಚಾಯತಿ ಅಂತರ್ಜಾಲ
  • ಆಹಾರ ಇಲಾಖೆಯ ವಿವರಗಳು/ವರದಿಗಳು
  • ಎಲ್.ಪಿ.ಜಿ/ರೇಷನ್ ಕಾರ್ಡ್ ಸ್ಥಿತಿ
Back
AREA
  • ಪ್ರದೇಶ: 2196 sq km
  • ಜನಸಂಖ್ಯೆ: 9621551
  • ಸಾಕ್ಷರತೆ ಅನುಪಾತ: 87.67%
  • ತಾಲ್ಲೂಕು: 5
  • ಹೊಬ್ಲಿ: 20
  • ಗ್ರಾಮ:588
  • ನಗರ ಸ್ಥಳೀಯ ಸಂಸ್ಥೆಗಳು:6

×
ABOUT DULT ORGANISATIONAL STRUCTURE PROJECTS